ಜಿಲ್ಲಾಡಳಿತ ರಾಯಚೂರು ಹಾಗೂ ಕೌಶಲ್ಯಾಭಿವೃಧ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜಂಟಿಯಾಗಿ ದಿನಾಂಕ : 04-04-2020 ಹಾಗೂ 05-04-2020ರಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ , ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸುತ್ತಿವೆ.


ಸದರಿ ಉದ್ಯೋಗ ಮೇಳದಲ್ಲಿ 150ಕ್ಕೂ ಹೆಚ್ಚು ಕಂಪನಿಗಳು/ಉದ್ಯೋಗದಾತರು ಹಾಗೂ 6000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ.

ವಿವಿಧ ಉದ್ಯಮದಾರರು ಹಾಗೂ ಉದ್ಯೋಗಾಸಕ್ತ ಯುವಕ/ಯುವತಿಯರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಇದಾಗಿದೆ.


ಈ ಉದ್ಯೋಗ ಮೇಳದಲ್ಲಿ ಡೈರಿ, ಕೃಷಿ, ಉತ್ಪಾದನೆ, ಚಿಲ್ಲರೆ ವ್ಯಾಪಾರ, ಆತಿಥ್ಯ, ಆಟೋಮೊಬೈಲ್, ಐಟಿ, ಕೆಪಿಒ, ಬಿಪಿಓ, ಬಿಎಫ್‌ಎಸ್‌ಐ ಐಟಿ, ಐಟಿಇಎಸ್ / ಬಿಪಿಒ, ಹಣಕಾಸು, ಬ್ಯಾಂಕಿಂಗ್ / ವಿಮೆ, ಟೆಲಿಕಾಂ, ಎಂಜಿನಿಯರಿಂಗ್,ಕನ್ಸ್ಟ್ರಕ್ಷನ್ ಇತ್ಯಾದಿ ಕ್ಷೇತ್ರದ ಉದ್ಯಮಗಳು ಭಾಗವಹಿಸುತ್ತಿವೆ